ಸಾಲು ಗುಡ್ಡಗಳೋ ಗುಡ್ಡಗಳ ಸಾಲೋ
ಇಲ್ಲ ಒಂದಕ್ಕೊಂದು ಒಡ್ಡಿದೆ ಸವಾಲೋ
ಶಾಲಾ ಪ್ರಾರ್ಥನೆಗೆ ನಿಂತ ಮಕ್ಕಳಂತಿಹುದೀ ಪರಿ
ಹರಡಿಹುದು ತುದಿಯಲ್ಲಿ ಸೂರ್ಯರಶ್ಮಿಯಾ ಗರಿ
ಹರಡಿಹುದು ತುದಿಯಲ್ಲಿ ಸೂರ್ಯರಶ್ಮಿಯಾ ಗರಿ
ಧಿಮ್ಮೆನುವಾ ಗಾಳಿಗೆ ಮೈದೂಗಿಹುದು ಹುಲ್ಲು
ತಂಗಾಳಿಯಾಗಿ ಬಂದಿಹ ಪ್ರೀತಿಯನೆ ನೀ ಮೆಲ್ಲು
ತಂಗಾಳಿಯಾಗಿ ಬಂದಿಹ ಪ್ರೀತಿಯನೆ ನೀ ಮೆಲ್ಲು
ಮೈದುಂಬಿ ನಿಂತ ನಿನ್ನ ನೋಡಲು, ರೊಟ್ಟಿ ಕಲ್ಲು
ಮರೆಯುತ್ತ ಮೈ ನಿಂತಿಹೆನು ನಾ ಸುರಿಸುತ್ತ ಜೊಲ್ಲು
ಮರೆಯುತ್ತ ಮೈ ನಿಂತಿಹೆನು ನಾ ಸುರಿಸುತ್ತ ಜೊಲ್ಲು
ಇಲ್ಲಿ ನಾಯಿಗಳು ನೆರಳಲ್ಲ, ಬೆಳಕಾಗಿ ಜೊತೆಯಾಗಿ ನಡೆದು
ನಿಂತೆಹೆನು ನಾ ಶಿಖರದಲ್ಲಿ, ಜೀವಂತಿಕೆಯ ಪಡೆದು
ನಿಂತೆಹೆನು ನಾ ಶಿಖರದಲ್ಲಿ, ಜೀವಂತಿಕೆಯ ಪಡೆದು
No comments:
Post a Comment