ಇರುಳೆಲ್ಲೆಡೆಯಿತ್ತು, ಇರಬಹುದು ಕತ್ತಲೆಂದು ಕಣ್ಣು
ತೆರೆದು ನೋಡಿದರೆ ಮುಚ್ಚಿತ್ತು ಬಾಗಿಲು
ತೆರೆದರೆ ಬಾಗಿಲ ಬರಬಹುದು ಬೆಳಕೆಂದು
ಮೆಲ್ಲನೆದ್ದು ತೆರೆದೆ ನಾ ಬಾಗಿಲು
ಕತ್ತಲು ತಿಳಿಯಾದರೂ ಪೂರ್ತಿ ಹೋಗಿರಲಿಲ್ಲ
ನೋಡಿದರೆ ಮುಚ್ಚಿತ್ತು ಮುಂದಿನ ಬಾಗಿಲು
ನಡೆಯದೆ ಗತ್ಯಂತರವಿಲ್ಲ, ತೆರೆಯದೇ ಬೆಳಕಿರಲಿಲ್ಲ
ಕೊನೆಗೂ ತೆರೆದೇ ಒಂದರ ನಂತರದೊಂದ ಬಾಗಿಲು
ಈಗ ಎಲ್ಲೆಡೆ ಬೆಳಕು...
ಒಳಗೂ ಹೊರಗೂ, ನನ್ನೊಳಗೂ ನನ್ಹೊರಗೂ
ತಂಪಾದ ಗಾಳಿ, ನಿರರ್ಗಳವಾದ ಕೊಳಲು
ಎಲ್ಲೆಡೆ ಹರಡಿತ್ತು ನಿರ್ಮಳವಾದ ಮುಗಿಲು
No comments:
Post a Comment