Monday, 20 August 2018

ತೆರೆದ ಬಾಗಿಲು

ಇರುಳೆಲ್ಲೆಡೆಯಿತ್ತು, ಇರಬಹುದು ಕತ್ತಲೆಂದು ಕಣ್ಣು
ತೆರೆದು ನೋಡಿದರೆ ಮುಚ್ಚಿತ್ತು ಬಾಗಿಲು

ತೆರೆದರೆ ಬಾಗಿಲ ಬರಬಹುದು ಬೆಳಕೆಂದು 
ಮೆಲ್ಲನೆದ್ದು ತೆರೆದೆ ನಾ ಬಾಗಿಲು

ಕತ್ತಲು ತಿಳಿಯಾದರೂ ಪೂರ್ತಿ ಹೋಗಿರಲಿಲ್ಲ 
ನೋಡಿದರೆ ಮುಚ್ಚಿತ್ತು ಮುಂದಿನ ಬಾಗಿಲು 

ನಡೆಯದೆ ಗತ್ಯಂತರವಿಲ್ಲ, ತೆರೆಯದೇ ಬೆಳಕಿರಲಿಲ್ಲ 
ಕೊನೆಗೂ ತೆರೆದೇ ಒಂದರ ನಂತರದೊಂದ ಬಾಗಿಲು 

ಈಗ ಎಲ್ಲೆಡೆ ಬೆಳಕು...
ಒಳಗೂ ಹೊರಗೂ, ನನ್ನೊಳಗೂ ನನ್ಹೊರಗೂ 
ತಂಪಾದ ಗಾಳಿ, ನಿರರ್ಗಳವಾದ ಕೊಳಲು 
ಎಲ್ಲೆಡೆ ಹರಡಿತ್ತು ನಿರ್ಮಳವಾದ  ಮುಗಿಲು 

ಜೈಲು ಉದ್ಯಾನ

An independence day afterthought!
Let every jail turn into a park, where;
birds make their nest freely
flowers bloom beatifully
leaves shine brightly
sunlight beams gently
smiles float across souls
energy flows softly
where not just humans but thoughts stroll lovingly.
ಪ್ರತಿ ಜೈಲು ಉದ್ಯಾನವನವಾಗಲಿ. ಇಲ್ಲಿ;
ಹಕ್ಕಿಗಳು ಗೂಡು ಕಟ್ಟಲಿ ಸ್ವಚ್ಚಂದವಾಗಿ
ಹೂಬಿರಿದು ನಗಲಿ ಸುಂದರವಾಗಿ
ಚಿಗುರೆಲೆಗಳು ಬೆಳೆಯಲಿ ಬಿರುಸಾಗಿ
ಸೂರ್ಯರಶ್ಮಿಯು ಬುವಿಮುಟ್ಟಲಿ ನವಿರಾಗಿ
ನಗು ಹರಿಯಲಿ ಮನಮನದಲ್ಲೂ ಸವಿಯಾಗಿ
ಚೈತನ್ಯ ಚಿಮ್ಮಲಿ ಜೀವಜೀವದಲ್ಲೂ ಪ್ರಖರವಾಗಿ
ಇಲ್ಲಿ ಜೀವಗಳಷ್ಟೇ ಅಲ್ಲ, ಪ್ರತಿ ಯೋಚನೆಯೂ ನಡೆದಾಡಲಿ ಸಲೀಸಾಗಿ.

ದಯೆ

Poem by Najwa Zebian -
may your heart
always be kind
even though
the world out there
could shatter you
for being kind.
it is kindness that makes you
brave.
ನಿನ್ನೆದೆ ಎಂದೆಂದಿಗೂ ಮಿಡಿಯಲಿ.
ಛ್ಹಿಧ್ರಗೊಳಿಸಬಹುದು ಅಲ್ಲಿರುವ ಪ್ರಪಂಚ
ನಿನ್ನೀ ದಯೆಗಾಗಿ.
ನೀನು ಸಾಹಸಿ ಈ ದಯೆಯಿಂದಲೇ.

My eyes want to be your home
If you could see yourself through my eyes,
you would never want to be seen by anyone else.

ನನ್ನ ಕಂಗಳಿಗೆ ನಿನ್ನ ಮನೆಯಾಗುವ ಬಯಕೆ 
ನೀನು ನಿನ್ನನ್ನು ನನ್ನ ಕಂಗಳಿಂದ ನೋಡಹತ್ತಿದರೆ 
ನೀನು ಎಂದೆಂದಿಗೂ ನಿನ್ನನ್ನು ಬೇರೆ ಕಂಗಳಿಂದ ನೋಡ ಬಯಸಲಾರೆ.

ಬಯಕೆ

My eyes want to be your home.
If you could see yourself
through my eyes,
you would never want to
be seen by anyone else.
- A poem by Najwa Zebian. Translated in Kannada.
ನನ್ನ ಕಂಗಳಿಗೆ ನಿನ್ನ ಮನೆಯಾಗುವ ಬಯಕೆ.
ನಿನ್ನನ್ನು ನೀನು ನನ್ನ ಕಂಗಳಿಂದ ನೋಡಹತ್ತಿದರೆ
ನೀನು ಎಂದೆಂದಿಗೂ ನಿನ್ನನ್ನು
ಬೇರೆ ಕಂಗಳಿಂದ ನೋಡ ಬಯಸಲಾರೆ.

ಹೂದಾನಿ

ಕುಳಿತಿರುವೆ ನಾ ನಿನ್ನ ನಿರೀಕ್ಶೆಯಲ್ಲಿ ಪ್ರಿಯೆ, ಕೇಳುತ್ತಿಲ್ಲವೆ ನನ್ನ ದನಿ
ಚಿಗುರಿಸು ಕುಡಿಯ, ಮೂಡಿಸು ಹೂ ಗುಚ್ಛ 
ಮಾಡು‌ ನೀ ನನ್ನ ಹೂದಾನಿ