Thursday, 1 May 2025

ಹೃದಯದ ಪಾಡು

ನನ್ನೆಡೆ ನೀ ಇಟ್ಟ ಪ್ರತಿ ಹೆಜ್ಜೆಗೂ
ಈ ಹೃದಯ ನಾಗಾಲೋಟಕಿತ್ತಿದೆ

ನೀ ಬೀರಿದ ಪ್ರತಿ ಮಂದಹಾಸಕ್ಕೂ
ಹೃದಯದ ಇಂಚಿಂಚಲ್ಲೂ ನಿನ್ನ ಪ್ರತಿಮೆ ಕೆತ್ತಿದೆ

ಬಳಿ ಬಂದು ನೀ ನಿಂತ ಆ ಕ್ಷಣದಿ
ಹೃದಯಕೆ ನಿನ್ನ ಹುಚ್ಚು ಹತ್ತಿದೆ

ನಿನ್ನ ಪ್ರೀತಿಯ ಘಮಲು
ನನ್ನ ಹೃದಯದ ಸುತ್ತ ಮೆತ್ತಿದೆ!

ವಿಠ್ಠಲ ರುಕುಮಾಯಿಯ ಧ್ಯಾನ



ಕಾಶಿಯ ವಿಶ್ವನಾಥನಷ್ಟೇ ಹಳೆಯವ ಕಾಶಿಯ ಬಿಂದು ಮಾಧವ. ಗಂಗೆಯ ಪಂಚ ಗಂಗಾ ಘಾಟಿನಲ್ಲಿ ಮೂರಂತಸ್ತು ಮೆಟ್ಟಿಲೇರಿದರೆ ಎಡ ಪಕ್ಕದಲ್ಲಿ ಗೋಕರ್ಣ ಪರ್ತಗಾಳಿ ಮಠವು ಎದುರಿಗೆ ಆಲಂಗಿರ್ ಮಸೀದಿಯು ಬಲ ಪಕ್ಕದಲ್ಲಿ ಏರಿಯ ಹತ್ತಿರ ಅಶ್ವಥ ಮರವೂ ಒಂದು ಪುಟ್ಟ ಮಂದಿರವು ಕಾಣಿಸುತ್ತದೆ. ಇದೆ ಬಿಂದು ಮಾಧವ ದೇವಸ್ಥಾನ. ಇಲ್ಲಿ ವಿಶ್ವನಾಥನಷ್ಟು ಅಬ್ಬರವಾಗಲಿ, ದರ್ಶನಕ್ಕೆಂದು ಬಂದ ಜನರ ಪ್ರವಾಹ ಎರಡೂ ಇಲ್ಲ. ಮಹಾಕುಂಭದ ಈ ಸಂದರ್ಭದಲ್ಲಿ ಕಾಶಿಯ ವಿಶ್ವನಾಥನನ್ನು ನೋಡಲು ಘಂಟೆ ಗಟ್ಟಲೆ ಕಾದ ನಮಗೆ ಬಿಂದು ಮಾಧವನ ಸುಲಭ ದರ್ಶನ ಹಾಲು ತುಪ್ಪ ಸವಿದಷ್ಟೂ ಖುಷಿಯಾಗಿತ್ತು. 


ಹೀಗೆ ಬಿಂದು ಮಾಧವನ ದರ್ಶನ ಮಾಡಿ 'ಥಟೆರಿ ಬಾಝರ್' ಕಡೆಗಿನ ಗಲ್ಲಿಯಲ್ಲಿ ಹೋಗುತ್ತಿದ್ದಾಗ 'ವಿಠ್ಠಲ ಮಂದಿರ' ಎನ್ನುವ ಹೆಸರು ದಾರಿ ಗುರುತಿನೊಂದಿಗೆ ನಮ್ಮ ಕಣ್ಣಿಗೆ ಬಿತ್ತು. ನನ್ನ ಜೊತೆಗಿನ ಮಿತ್ರ ದೀಪಕ್ ಮರಾಠಿಗನಾದ್ದರಿಂದ ಈ ಮಂದಿರವೆನ್ನೊಮ್ಮೆ ನೋಡೋಣ ಎನಿಸಿ ಆ ಗುರುತನ್ನು ಹಿಂಬಾಲಿಸಿದೆವು. ಮುಂದೆಯೂ ಗಲ್ಲಿಗಳಲ್ಲಿ 'ವಿಠ್ಠಲ ಮಂದಿರ' ಹೆಸರಿನೊಂದಿಗೆ ದಿಕ್ಷೂಚಿಗಳಿದ್ದವು. ಅದನ್ನೇ ಅನುಸರಿಸಿ ಒಂದೆಡೆ ಬಂದರೆ ಅಲ್ಲಿ  ಅರ್ಧ ಬಾಗಿಲಿರುವ ಒಂದು ಮನೆಯಂತೆ ಕಾಣುವ ಕಟ್ಟಡವಿತ್ತು. ನಮಗೋ ಇದು ಮನೆಯೋ ಅಥವಾ ಮಂದಿರವೋ ಅನ್ನುವ ಅನುಮಾನ. ಯಾರನ್ನಾದರೂ ಕೇಳುವ ಎಂದರೆ ಆ ಪರಿಸರದಲ್ಲಿ ಯಾರೂ ಇರಲಿಲ್ಲ. ಸ್ನೇಹಿತ ಕೀರ್ತನ್ ಹೇಳಿದ "ಈ ಬಾಗಿಲು ದನಗಳು ಒಳ ಬರಬಾರದೆಂದು ಇಟ್ಟಿರಬೇಕು. ತೆರೆಯುವುದೋ ನೋಡೋಣ" ಎಂದು. ನಾನು ಸುಮ್ಮನೆ ಬಾಗಿಲನ್ನು ದೂಡಿದೆ. ಅದು ಹಾಗೆಯೇ ತೆರೆಯಿತು. ಒಳ ಹೋಗಿ ನೋಡಿದರೆ ಅಲ್ಲಿ ಮಂದಿರದ ಕುರುಹಿಲ್ಲ. ಬದಲಿಗೆ ಯಾವುದೊ ಹಳೆ ಮನೆಯ ರಿಪೇರಿ ನಡೆಯುತ್ತಿರುವಂತೆ ಟಾರ್ಪಲಿನ್ ಶೀಟ್ ಗಳು, ಮುರಿದು ಬಿದ್ದ ಸಾಮಾನು ಎಲ್ಲ ಕಾಣುತ್ತಿತ್ತು. ಅಲ್ಲೇ ಒಂದು ಚಿಕ್ಕ ಕಾಲ್ದಾರಿಯು ಇತ್ತು. ಇಲ್ಲಿಯವರೆಗೆ ಬಂದ ನಾವು ಪೂರ್ತಿ ನೋಡಿಯೇ ಬಿಡೋಣ ಎಂದು ನಾನು ಕಾಲ್ದಾರಿ ಕ್ರಮಿಸಿ ಕೊನೆಯವರೆಗೂ ಹೋಗಿ ನೋಡಿದೆ. ಅರೆ ಏನಾಶ್ಚರ್ಯ! ಆ ದಾರಿಯ ಕೊನೆಗೆ ಗಂಗೆಯನ್ನು ಮುಖ ಮಾಡಿ ಕೊಂಡು ಒಂದು ಪುಟ್ಟ 'ವಿಠ್ಠಲ ರುಕುಮಾಯಿ' ಮಂದಿರ ಇತ್ತು. ಗರ್ಭ ಗುಡಿಗೆ ಬಾಗಿಲು ಹಾಕಿದ್ದರು. ಆದರೆ ವಿಗ್ರಹಗಳನ್ನು ಬಾಗಿಲ ಮೂಲಕ ನೋಡಬಹುದಿತ್ತು.   ಗುಡಿಯ ಮುಂದೆ ಹತ್ತಾರು ಜನ ಕುಳಿತು ಕೊಳ್ಳಬಹುದಾದಷ್ಟು ಜಾಗವಿತ್ತು. ಗಂಗೆಯ ಕಡೆಗಿನ ಭಾಗಕ್ಕೆ ಟಾರ್ಪಾಲಿನ್ ಮುಚ್ಚಿದ್ದರು. ಯಾಕೆಂದರೆ ಆ ಕಡೆ ಮಂದಿರದ ಕಾಮಗಾರಿ ನಡೆಯುತ್ತಿತ್ತು. ನಾವು ಮೂವರು ದೇವರಿಗೆ ಸಾಷ್ಟಾಂಗ ನಮಸ್ಕರಿಸಿ ಅಲ್ಲಿಯೇ ಧ್ಯಾನಾಸಕ್ತರರಾಗಿ ಕುಳಿತೆವು. 


ಮಹಾಕುಂಭ ಈ ಸಂದರ್ಭದಲ್ಲಿ ಕಾಶಿಯೆಲ್ಲೆಡೆಯೂ ಜನವೋ ಜನ. ವಿಶ್ವನಾಥನ ದರ್ಶನಕ್ಕೆಂದು ಕಿಲೋ ಮೀಟರ್ಗಟ್ಟಲೆ ಸಾಲುಗಟ್ಟಿ ನಿಂತ ಜನ, ಗಂಗೆಯ ಎರಡು ದಡದಲ್ಲಿ ಸ್ನಾನ ಮಾಡುತ್ತಿರುವ ಜನ, ಗಂಗೆಯ ಮೇಲೆ ವಿಹರಿಸುತ್ತಿರುವ ನೂರಾರು ದೋಣಿಗಳು, ಕಾಶಿಯ ಗಲ್ಲಿಗಳಲ್ಲಿ ಅತ್ತಿಂದಿತ್ತ ಓಡಾಡುವ ಜನ, ಇವರ ಜೊತೆ ಪೈಪೋಟಿಗೆ ಹೊರಟವರಂತೆ ಹಾರ್ನ್ ಬಾರಿಸುತ್ತ ಓಡುತ್ತಿರುವ ದ್ವಿಚಕ್ರ ವಾಹನಗಳು. ಹೀಗೆಯೇ ಎಲ್ಲಿ ನೋಡಿದರಲ್ಲಿ ದಿನದ ಯಾವುದೇ ಸಮಯದಲ್ಲಿ ಸದಾ ಗಿಜಿಗುಡುತ್ತಿರುವ ಕಾಶಿ ನಗರ. ಆದರೆ ವಿಠ್ಠಲ ರುಕುಮಾಯಿ ಮಂದಿರದ ಈ ಒಂದು ಜಾಗದಲ್ಲಿ ನಮಗೆ ಅದಾವುದರ ಕಾಟವಿರಲಿಲ್ಲ. ಇಲ್ಲಿ ಜನರೂ ಇಲ್ಲ ಸದ್ದೂ ಇಲ್ಲ. ಇಂತಹ ಪರಿಸರದಲ್ಲಿ ನಾವು ಮೂವರು ಧ್ಯಾನ ಮಾಡುತ್ತಾ, ಸುಮ್ಮನೆ ಕೂರುತ್ತಾ ಸುಮಾರು ಒಂದು ಘಂಟೆಯ ಸಮಯ ಕಳೆದಿರಬಹುದು, ಅಷ್ಟ್ರಲ್ಲಿ ಮಂದಿರದ ಅರ್ಚಕನು ಬಂದು ಗರ್ಭ ಗುಡಿ ತೆರೆದು ಒಳ ಹೊಕ್ಕನು. ಅವನಲ್ಲಿ ನಾನು, "ಈಗ ಪೂಜೆ ನಡೆಯುದೇ?" ಎಂದು ಕೇಳಿದೆ. ಅದಕ್ಕವನು ಪೂಜೆ ಬೆಳಗ್ಗೆಯೇ ಆಗಿದೆ, ನಿಮಗೆ ಪೂಜೆ ನೋಡುವುದಿದ್ದರೆ ನಾಳೆ ಬೆಳಗ್ಗೆ ೭:೩೦ ಕ್ಕೆ ಬನ್ನಿ ಎಂದನು. ಹಾಗೆಯೇ ಪೂಜೆಯ ಪ್ರಸಾದ ತೆಗೆದುಕೊಳ್ಳಿ ಎಂದು ನಮ್ಮಗಳ ಕೈಯಲ್ಲಿ ಪ್ರಸಾದವನ್ನಿಟ್ಟು ಗರ್ಭ ಗುಡಿಗೆ ಬೀಗ ಜಡಿದು ಹೊರಟನು. 

ನಾವು ಪ್ರಸಾದ ತಿಂದು ಧನ್ಯತಾ ಭಾವದಿಂದ ಮಂದಿರದಿಂದ ಹೊರ ಬಂದು 'ಥಟೆರಿ ಬಾಝರ್' ಕಡೆಗೆ ಹೆಜ್ಜೆ ಹಾಕಿದೆವು.

ಆ ದಿನದ ಮರುದಿನ

ಯಾಕೋ...
ಇಂದು ಗಾಳಿಗಿಂತ ಹರಿಯುವ ನೀರಿನ ಶಬ್ದ ಜೋರಾಗಿತ್ತು
ಗಿಡುಗ ಪದೇ ಪದೇ ಮೀನು ಹಿಡಿಯಲು ಪ್ರಯತ್ನಿಸುತ್ತಿತ್ತು
ಬಿಸಿಲ ಕೋಲುಗಳು ಮೋಡಗಳ ಮರೆಯಲ್ಲಿ ಅವಿತಿತ್ತು
ಅಶ್ವತ್ಥ ಮರ ತನ್ನೆಲ್ಲ ಎಲೆಗಳನ್ನು ಉದುರಿಸಿ ತಣ್ಣನೆ ನಿಂತಿತ್ತು
ಪಕ್ಕದ ರೋಡಲ್ಲಿ ಓಡುತ್ತಿದ್ದ ಆಂಬುಲೆನ್ಸ್ ಹಾರ್ನ್ ಸ್ವಲ್ಪ ಜೋರಾಗಿಯೇ ಬಾರಿಸುತ್ತಿತ್ತು
ಯಾವತ್ತೂ ತಣ್ಣನೆ ಮಲಗಿರುತ್ತಿದ್ದ ನಾಯಿಗಳು ಅತ್ತಿಂದಿತ್ತ ಓಡುತ್ತಿದ್ದವು
ಕಾಲು ದಾರಿಯಲ್ಲಿ ಜಾಗಿಂಗ್ ಮಾಡುತ್ತಿದ್ದವರ ಏದುಸಿರು ಕಿವಿಗೆ ಬಡಿಯುತ್ತಿತ್ತು
ಉದ್ದಿನ ವಡೆ ಬಾಯಲ್ಲಿಟ್ಟರೆ ಮೆದುವಾಗಿತ್ತು 
ಹಬೆಯಾಡುತ್ತಿದ್ದ ಕಾಫಿಯೂ ತಣ್ಣಗಾಗಿತ್ತು!

Sunday, 16 February 2025

ಮದುವೆ ಮನೆ

ಕರೆದಿಹುದೆನ್ನ ಸಹ್ಯಾದ್ರಿಯ ಮಡಿಲಿಗೆ ನೇತ್ರಾವತಿಯ ತುಡಿತ

ಸಂಸೆಯಲಿ ಕಾಲಿಟ್ಟಾಗ ಮತ್ತೆ ಮತ್ತೆ ಪನ್ನೀರಿನ ಸ್ವಾಗತ

ಮೈಯೆಲ್ಲಾ ತಂಪಾಗಿಸುವ ಹವೆ ಸುತ್ತಲೂ
ಮದುವೆ ಮನೆಯ ವಾತಾವರಣ ನಿರ್ಮಿಸಿದ ಹೂಗಳು

ಮಾಡಿತ್ತು ಹಕ್ಕಿಗಳ ಕಲರವ ಓಡಾಡುತ್ತಾ
ಗೌಜಿ ಹಬ್ಬಿಸಿದಂತೆ ಪುಟ್ಟ ಮಕ್ಕಳು

ಅಡುಗೆ ಮನೆಯ ರಾಡಿಗೆ ಗಲೀಜಾದ ಕಾಲನ್ನು
ತೊಳೆಯಲು ಕಾಯುತ್ತಿರುವ ತಂಪು ನೀರಿನ ತೊರೆಗಳು

ಬರೆದಿತ್ತಲ್ಲಿ ಒಂದೆಡೆ ಹರಿಯುವ ನದಿಯ ಬಳಿ
ಕುಡಿಯುವ ನೀರು ಗಲೀಜು ಮಾಡಬೇಡಿ

ಊಟದ ಸಮಯಕ್ಕೆ ನುಗ್ಗುವ ಮೋಡಗಳ ತಡೆದು
ಹಿಂದಿನ ಪಂಕ್ತಿ ಇನ್ನೂ ಮುಗಿದಿಲ್ಲ ಎನ್ನುವ ಶಿಖರಗಳು

ನೇತ್ರಾವತಿ ಬೆಟ್ಟದ ತುದಿಯನ್ನೇರಿ ನಿಂತ ಸಾಹಸ
ಮದುವೆ ಮಂಟಪವೇರಿ ವಧುವರರ ಕೈ ಕುಲುಕಿದ ಸಂತಸ



Saga of Firsts


 In the first week of Jan, I had finally registered for my first Himalayan trek, although after thinking about it for many years. Obviously, I was excited and nervous at the same time thinking about snow, breeze, landscape and sleeping in a tent for the first time. After browsing through several other trek destinations, I chose KedarKantha. I spoke to three ladies who had trekked earlier in Himalayas and all three of them said, KedarKantha is beautiful, and I should do it. The name also attracted me since it was one of the abodes of Shiva. As I started to scout for people in my known circles to accompany me, I had managed to get two more people joining me – Raksha and Anish. This was a first for them too.


As this was my first trek, I wanted to go for a slightly lesser difficulty level in terms of effort and time. I was planning for a time when it is not too cold, and the trail is easy to hike. And hence I chose the month of Mar when there is snow, but it is not winter anymore. However, mother nature had her own plans, and I witnessed the snow, the snow fall and spent nights when it was minus 5-degree temperature, all for the very first time.

Next was the choice of trek operator. After contemplating to go with lesser-known trek operators, I had chosen Indiahikes. Indiahikes was unanimously recommended by all three ladies (Smitha, Krishna and Chithra) who I spoke and  had done multiple Himalayan treks through Indiahikes. I am happy that I too made this decision because Indiahikes is the best trek organizer if one is going on a trek for the first time. They have every bit of information documented to the minutest details on their website and using the YouTube channel. On top of it, they have a robust support system in the form of WhatsApp group, e-mail communication, virtual trek guide, web meeting etc. And when you reach the base camp, you will find more people who are there to support you in the form of Trek Leads, Guides, Care takers etc. Indiahikes has clearly laid out processes for everything from fitness, safety, health to care for nature, preserving the sanctity of the local places etc.

With butterflies in my stomach, I arrived at Indiahikes Kotgaon campus on one of the March evenings. Kotgaon is a beautiful hamlet in the Himalayas with beautiful people and picturesque surroundings. It was magical all around with beautiful snowclad mountains looking at you from a distance, wooden houses in different shapes and colours and a chilled atmosphere. The moment we landed; we received a warm welcome from the inmates of the campus with quick instructions on what to do next. This is how we operated for the next 4 days/nights as there were always next steps to follow in the form of quick instructions.

We were a group of seventeen people; with one trek lead (Hemant) and two guides (Santosh and Tanu), we were a group of twenty people who were trekking together. There was surprise entry of two more lives as we started our trek next day; that was Kalu and Shera, the two dogs from Kotgaon. They were part of our trek, at least until we completed the summit. Of course, we had the support staff of Indiahikes like Porters who were carrying stuff for us, cooks who were stationed at each camp site to cook hot food us etc. Our first briefing session started on the night of our arrival after dinner. Post this intro and briefing session everything dramatically changed. Entire group which was not known to each other until then behaved as if we were close relatives and gotten together to attend our ‘Mamaji Kay Ladke Ki Shaadi.’ During the trek, we all acted like one family and not just enjoyed our time together having nice conversations over breakfast, lunch, evening chai and dinner but during our trek too helping each other, sharing snacks, taking each other’s pics and videos and yes, singing our heart out. This camaraderie continues till date on WhatsApp group.

Our trek group was an interesting mix of people. Some had come with their family (Piyush, Nilu, Aadya & Happy, Pankaj & Vidita, Hardik, Isha, Foram & Ahaana, Rittick & Dhriti and of course me with Raksha & Anish) and some had come alone like Prashant Sir and Daisy. While Hardik and Foram were just married, Rittick and Dhriti were about to get married. There were some like Prashant, Pankaj, Hardik who had done several treks. For the 10-year-old Vidita, this was her fourth trek. However, for most of us it was our first Himalayan trek. People were also from various parts of the country spanning north to south, east to west. So, our trek represented whole of India in that place.




My encounter with snow started the second day after hiking about 2.5 to 3 kms. From a point where there was a small Dhaba (a hut constructed using stones to be protected from snow and winds) where we had Chai and Bun. Until we came back to the same spot after two days, we had ice and snow throughout our trail. A lot of us slipped on the ice as we did not have spikes attached to our shoes on the second day. Third day, we got the spikes attached to our shoes and we managed to walk on the ice. Fourth day, we also got floaters attached to our legs as we had to walk in deep snow in some pockets. It was a unique experience to walk in the snow under extremely low temperatures with the four layers of clothing and gears given to us. It was not possible to survive the weather condition that we encountered without the gears (dark sunglasses to protect us from harsh UV rays due to snow all around us, trek poles to help us navigate the trail, spikes and floaters on the shoes to protect the legs from slipping through and getting wet, baclava and other clothing to save us from the chills) that we either rented out or were given by Indiahikes.


On the second day, we had reached Khujai, a mesmerizing piece of land between snow clad mountains on one side and view of Himalayan valley on the other. Our tents were already laid for us here and I had to choose a tent for myself and had to also choose a partner to stay with me. I chose Prashant Sir as he had already chosen a tent. I am glad, I did that. I used to feel sick every night (could be the weather condition or tiredness from hiking) and Prashant Sir was an immense help and also the pills that I popped every night. However, next morning, I used to be all  fine to do the trek. So, my first experience of staying in a tent with stunning natural beaty all around me will go with me to my grave. There are other bits of experiences which is best kept within the group that I trekked with. 😊

Our third day was slightly lighter compared to all days and we had to hike only three kms. This trail was completely snow covered and at one pit stop, we came together to build snow man. Kids took the lead and did bulk of the work and were most excited when the snow man stood there HAPPYily.



By the end of the trek, we had reached our Summit base – Bhoja Dhadi. This is a tiny place where Indiahikes had managed to setup a camp for a small group of trekkers. There was no space to move around other than the space where tents were setup. We had to only spend half night here as we were to start our trek by 4 am, the next day which means we had to get up by 2 am and get ready to hike. This is the place where I saw first snow fall of my life. By evening, it got dark and started to snow. It was a drizzle like fall and did not disturb much. As the temperatures had drastically dropped, we remained in our tents and did not dare to get out. I touched the snow when I got out the tent for our evening sitting and it felt like touching a soft toy which would melt in my palm.



Our fourth day started earlier than expected as it felt no one had slept that night due to the excitement of doing the summit. An unexpected event made us get out of the tents earlier than planned and we were all ready to hike much before 4. Hiking with all gears in pitch dark is quite unique experience. We could only see our next step and following the person ahead of us. My pace of hiking was only as good as the person ahead of me. We followed our trek lead’s advice of walk like turtle but steadily.





At the crack of the dawn, everything started to appear surreal. We were at the shoulder level of Kedar Kantha peak, and the peak was peeking at us on our head from a short distance. Light was visible at a distance over the range of mountains on the right and on the left, mountain cliffs had turned into gold and glittering. Nearby mountain horizons have turned into platinum and shining and snow all around us had started to appear like silver coated bed. Entire Kedar Kantha mountain was looking like a bride full of ornaments. I was jumping with joy with my feet stuck in knee-deep snow. We were yet to do our summit which took us an hour and half more due to the elevation it had.

ನಸುಗತ್ತಲಲಿ ನಡೆದಿತ್ತು ಕೌಟುಂಬಿಕರ ಚಾರಣ
ನಡೆದಷ್ಟು ಉಳಿದಿತ್ತು ಹಿಮಾಲಯದ ಆರೋಹಣ
ದಾರಿಯುದ್ದಕ್ಕೂ ಜೊತೆಯಿತ್ತು ಮಂಜಿನಾವರಣ
ಒಬ್ಬರ ಹಿಂದೊಬ್ಬರಂತೆ ಸಾಗಿತ್ತು ಮದುವೆ  ದಿಬ್ಬಣ...
ಕೇದಾರ ಕಂಠದ ಬೆಳ್ಳಿ ಮಂಟಪದಲ್ಲಿ
ಆರಂಭಿಸಿದ್ದವು ಕಾಗೆಗಳಾಗಲೆ ಲಾವಣಿ ||
ಕಾಲೂ ಮತ್ತು ಶೇರಾ ಸಂಭ್ರಮಿಸುತ್ತಿದ್ದರಿಲ್ಲಿ
ಆಹ್ವಾನವಿಲ್ಲದಿದ್ದರೂ ಮುಂಚೂಣಿ||
ಅತಿಥಿಗಳಾಗಿ ಕೂತಿದ್ದರು ಮುಂಚಿತವಾಗಿಲ್ಲಿ
ದೇವ್ ಖೇರಾ, ಕಾಲ ನಾಗ್, ಸ್ವರ್ಗಾರೋಹಿಣಿ ||
ಪೂರ್ಣಗೊಳಿಸಲು ವಿವಾಹ
ಬೀರಿ ಬೆಳಕಿನ ಪ್ರವಾಹ
ಪರ್ವತಗಳಾಚೆಯಿಂದ
ಸೂರ್ಯನೇ ಬಂದ
ಹಿಮವೆಲ್ಲ ಬೆಳ್ಳಿಯಾಗಿ
ಶಿಖರಗಳು ಬಂಗಾರವಾಗಿ
ತಯಾರಾದಳು ಸತಿ
ಮದುವಣಗಿತ್ತಿಯಾಗಿ...
ಮುಂಜಾವಿನ ಮದುವೆಗೆ

There was tiny temple built for Shiva on the top (but without any idol. I heard later from the locals that an idol reaches top of the mountain during the annual mela) and I had to settle down in front of it for few mins to calm myself down from the exhaustion and excitement of doing the summit. Post this it was time for us to enjoy the views of the Himalayan Mountain ranges. We clicked videos, pics and also celebrated Holi (Thanks to Pankaj). And for the first time, I witnessed someone proposing to his life partner, yes right on top of the Kedarkantha mountain. Rittick proposed Dhriti which he was planning for some time and finally did at the summit. Santosh, our guide explained about different mountains and their names. There are many stories connected to this mountain referring back to Mahabharata and Shiva.






Getting down from the KedarKantha peak was a new adventure as we planned to slide down the steep snowy path on our bums. For the first time, I was sliding down a slopy snowy mountain. All of us were reluctant do it initially,  but with a couple of demos by our guides and with the effort of one brave soul, we all went sliding down the first slope. Then we slid another slope down, then another and another and another… and realized it was damn fun. Some of us rolled down like a ball and some did not move after a distance and had to walk down. The distance that we took 2-3 hours to climb, we covered in just one hour while coming back as we were sliding down.
Next one day of walk `back to the Kotagaon campus was fast as we did not stop much while walking back or it could be that we were eager to reach back. We only stopped at one place where there was the Dhaba and where all the snow ended. Here our trek lead Hemant conducted a meditation exercise (which was another first) where all of us sat witnessing the captivating mountain ranges in front of us and following his instructions. It was soothing, relaxing, and liberating all at the same time. 



Back at the Kotgaon campus, we were given the Kotgaon village tour by our trek guide Tanu. He showed us the village ground, temple and also his house. We got to know that kitchens, storehouses (Khotaar) are separate from the house as houses here are built in wood to keep the warmth. We got to meet kids playing heartily around the village and also old women. We plucked flowers from the Cherry Blossom trees. Later that night, we celebrated Piyush’s birthday after our final briefing session. We had to return gears that we had rented or borrowed from Indiahikes. Campus was buzzing with other groups which had arrived that evening to trek another trail – Har Ki Dhun. There were other trek leaders too at the campus either resting or prepping up for their next trek. It was as if entire India was at this campus with people from various parts of the country united at one place sharing a common love – the love for mountains.





It was not easy to depart from the family which we had built in last 4-5 days, but we were committed to stay connected using our WhatsApp group. Journey back was slow and tiring. Most of slept through until we reached Dehradun where we bid the final adieu to the group. We were all in hangover of the trek and kept sharing pics, posts, and messages on social media even after a couple of weeks.

This saga of firsts, I am sure, I am going to carry for a very long time and cherish.


Picture and Video courtesy: My Indiahikes Trek group of 16th Mar 24.





ಮಹಾಸ್ಮಶಾನದ ಮೌನ

ಕಾಶಿಯ ಮಣಿಕರ್ಣಿಕಾ ಘಾಟಿನ ಮಹಾಸ್ಮಶಾನದಲ್ಲಿ ಕೆಲವು ಮಜಲುಗಳಿವೆ. ಗಂಗೆಯ ದಡದಲ್ಲಿಯೇ ಕೆಲವು ಮಜಲುಗಳನ್ನು ಮಾಡಿ ಶವಗಳನ್ನು ಸುಡುತ್ತಾರೆ, ದಡದಲ್ಲಿನ ನೆಲ ಮಾಳಿಗೆಯಲ್ಲಿ ಸ್ಮಶಾನವನ್ನು ಕಾಯುವ ರುದ್ರನ ಪುಟ್ಟ ಮಂದಿರವಿದೆ. ಈ ಮಂದಿರದ ಪಕ್ಕ ನಾಲ್ಕು ಮೆಟ್ಟಿಲೇರಿದರೆ ಮೂರು ನಾಲ್ಕು ಜನರು ಕುಳಿತುಕೊಳ್ಳಬಹುದಾದಂತಹ  ಒಂದು ಚಿಕ್ಕ ಮಂಟಪವಿದೆ. ಹಾಗೆಯೇ ಇನ್ನೂ ನಾಲ್ಕು ಮೆಟ್ಟಿಲೇರಿದರೆ ಮೇಲ್ಮಜಲಿನ ಸ್ಮಶಾನವಿದೆ. ನಾನು ನನ್ನ ಮಿತ್ರ ಕೀರ್ತನ್ ಹಾಗೆಯೇ ಸ್ಮಶಾನದ ದರ್ಶನ ಮಾಡುತ್ತಾ ಮೇಲಿನ ಮಹಡಿಯನ್ನು ಹತ್ತುತ್ತಿದ್ದಾಗ ಮಂಟಪದಲ್ಲಿ ಕುಳಿತಿದ್ದ ಸಾಧುವಿನ ಮೇಲೆ ದ್ರಷ್ಟಿ ಹರಿಯಿತು. ಈ ಸಾಧು ಸುಮಾರು ೩೦ರ ಆಸುಪಾಸಿನ ಹೆಂಗಸು. ಅವಳು ಅರ್ಧಸಿದ್ಧಾಸನದಲ್ಲಿ ಕುಳಿತು ಯಾವುದೋ ಪುಸ್ತಕ ಓದುವುದರಲ್ಲಿ ತಲ್ಲೀನಳಾಗಿದ್ದಳು. ಮೈ ತುಂಬಾ ಕಪ್ಪು ಬಟ್ಟೆ  ಧರಿಸಿದ್ದ ಅವಳು ಭಾರತೀಯಳಾಗಿರಲಿಲ್ಲ. ಒಂದು ಕೈಯಲ್ಲಿ ಜಪ ಮಾಲೆ ಹಿಡಿದಿದ್ದ ಅವಳು ತನ್ನ ಬಳಿ ಬಂದು ನಮಸ್ಕರಿಸಿದವರ ಹಣೆಗೆ ವಿಭೂತಿಯ ತಿಲಕ ಇಡುತ್ತಿದ್ದಳು. 



ನಾವು ಮಂಟಪವನ್ನು ದಾಟಿ ಮೇಲಿನ ಸ್ಮಶಾನವನ್ನು ಹೊಕ್ಕೆವು. ಒಂದು ಕೊನೆಯಲ್ಲಿ ಕೆಲವು ಸಾಧುಗಳು  ಗಾಂಜಾ ಸೇವನೆಯಲ್ಲಿ ತೊಡಗಿದ್ದರು. ಅಲ್ಲಿ ಕೆಲ ಕಾಲ ಇದ್ದು ಮತ್ತೆ ಮೆಟ್ಟಲು ಇಳಿಯುತ್ತಿದ್ದಾಗ ಸ್ಮಶಾನದ ಕರ್ಮಚಾರಿಯೊಬ್ಬ ಮಂಟಪದಲ್ಲಿ ಕುಳಿತಿದ್ದ ಸಾಧುವನ್ನು ತೋರಿಸುತ್ತ "ಅಘೋರಿ ಬಾಬಾ ಹೈ, ಜಾಯಿಯೇ" ಅಂದ. ನಾನು ನನ್ನ ಮಿತ್ರನೂ ಮಂಟಪವನ್ನು ಪ್ರವೇಶಿಸಿ ಅವಳ ಕಾಲಿಗೆ ಎರಗಿದೆವು. ಅವಳು ರೂಢಿಯಂತೆ ನಮ್ಮ ಹಣೆಗೆ ತಿಲಕವನ್ನಿಟ್ಟಳು. ಅವಳ ಪಕ್ಕದಲ್ಲಿ ಅವಳ ಸಹಾಯಕನಂತೆ ತೋರುತ್ತಿದ್ದ ಒಬ್ಬ ಭಾರತೀಯನಿದ್ದ. ಅವನೂ ಜಪದಲ್ಲಿ ನಿರತನಾಗಿದ್ದ. ಅವನ ಬಳಿ ನಾನು ಇಲ್ಲಿ ಕೂರಬಹುದೇ ಎಂದು ಕೇಳಿದೆ. ಅವನು ಹೌದೆಂದು ತಲೆಯಾಡಿಸಿದ. ನಾವಿಬ್ಬರು ಅಲ್ಲಿ ಧ್ಯಾನಬದ್ಧರಾಗಿ ಕುಳಿತೆವು.



ನಾವು ಅಲ್ಲಿ ಸುಮಾರು ಹತ್ತು ನಿಮಿಷದ ಆಸುಪಾಸು ಕಣ್ಣು ಮುಚ್ಚಿ ಕುಳಿತಿರಬಹುದು. ಮೆಲ್ಲನೆ ಕಣ್ಣು ತೆರೆದು ನಾನು ಸುತ್ತಲೂ ನೋಡಿದಾಗ ಯಾವುದೋ ಪರಲೋಕದಿಂದ ಮತ್ತೆ ಇಹಲೋಕಕ್ಕೆ ಬಂದ ಅನುಭವ. ಅವಳ ಪಕ್ಕದಲ್ಲಿ ಕುಳಿತ ಸಹಾಯಕನಲ್ಲಿ ಮೆಲ್ಲಗೆ "ಫೋಟೋ ಲೇ ಸಕ್ತೆ ಹೈ ಕ್ಯಾ?" ಎಂದು ಕೇಳಿದೆ. ಅವನು ಹೌದೆಂದು ತಲೆಯಾಡಿಸಿದ. ನಾನು ಸಿಕ್ಕಿದ ಅವಕಾಶವನ್ನು ಬಿಡದೆ ಎರಡು ಫೋಟೋ ಕ್ಲಿಕ್ಕಿಸಿದೆ. ಹಾಗೆಯೇ ನನ್ನ ಮುಂದೆ ಕುಳಿತಿದ್ದ ಅಘೋರಿ ಸಾಧುವನ್ನು ಸ್ವಲ್ಪ ಗಮನಿಸಿದೆ. ಅವಳ ಮುಖದಲ್ಲಿ ಒಂದು ಗಹನವಾದ ನೆಮ್ಮದಿಯಿತ್ತು. ಜಗತ್ತಿನ ಗೊಂದಲದ ನಡುವೆ ತನ್ನನ್ನು ತಾನು ಕಳೆಯದ ಸ್ಥಿರತೆಯಿತ್ತು. ನಾವು ಎದ್ದು ಹೊರಡುವಾಗ ನಾನು ಮತ್ತೊಮ್ಮೆ ವಂದಿಸಿದೆ. ಅವಳೂ ಕಣ್ಣಲ್ಲೇ ನಮ್ಮನ್ನು ಬೀಳ್ಕೊಟ್ಟಳು. 


ಮಂಟಪದಿಂದ ನಾಲ್ಕು ಮೆಟ್ಟಿಲು ಮೇಲೆ ನಾಲ್ಕು ಮೆಟ್ಟಿಲು ಕೆಳಗೆ ಕೆಲ ಮನುಷ್ಯರು ತಮ್ಮ ಇಹಯಾತ್ರೆ ಮುಗಿಸಿ ಪರಲೋಕಡೆಗೆ ಹೋಗಲು ಸಜ್ಜಾಗುತ್ತಿದ್ದರು. ಇವರ ಈ ಕಾರ್ಯವನ್ನು ಸಂಪನ್ನಗೊಳಿಸಲು ಅಲ್ಲಿ ಕಾರ್ಮಿಕರ ಸಂಬಂಧಿಕರ ಗೌಜಿ ನಡೆಯುತ್ತಿತ್ತು. ಇದರ ಜೊತೆಗೆ ಕಾಶಿ ವಿಶ್ವನಾಥನನ್ನು ಮಹಾಕುಂಭದ ಸಮಯದಲ್ಲಿ ನೋಡಲು ಬಂದ ಭಕ್ತರ ದಂಡೇ ಎಲ್ಲಿಲ್ಲದ ಗದ್ದಲ ಮಾಡುತ್ತಿದ್ದರು. ಎಲ್ಲೆಡೆ ಜನರ ಮಾತು, ಸದ್ದು ಕೇಳಿಸುತ್ತಿತ್ತು. ಆದರೆ ಇವುಗಳ ಯಾವುದೇ ಪರಿವೆಯಿಲ್ಲದೆ ಆ ತ್ರಿಶಂಕು ಮಂಟಪದಲ್ಲಿ ಕಣ್ಮುಚ್ಚಿ ಕುಳಿತ ಕೆಲ ನಿಮಿಷಗಳು  ನಾನು ಅನುಭವಿಸಿದ ಅಪೂರ್ವ ಮೌನದ ಕ್ಷಣಗಳಾಗಿತ್ತು.


ಸ್ವಪ್ನ ಸಾರಸ್ವತ

 ಓದಿ ಮುಗಿಸಿದ ಹಲವು ದಿನಗಳ ನಂತರವೂ ಕಾಡುವ ಕಾದಂಬರಿ - ಸ್ವಪ್ನ ಸಾರಸ್ವತ. ಸಾರಸ್ವತನಾದ ನನ್ನ ಪೂರ್ವಜರ ಕಥೆ ಇದು ಎನ್ನುವುದು ಒಂದು ಕಾರಣವಾದರೆ, ಶ್ರೀ ಗೋಪಾಲಕೃಷ್ಣ ಪೈಯವರು ಇದರಲ್ಲಿ ಹುದುಗಿಸಿರುವ ಅನೇಕ ವಿಷಯಗಳು ಮತ್ತು ಆ ವಿಷಯಗಳ ಸೂಕ್ಷ್ಮತೆಗಳೂ ಇರಬಹುದು. ಓದಿ ಮುಗಿಸಿದ ಕೊನೆಯಲ್ಲಿ ಒಂದು ನಿರಾಳತೆಯ ನಿಟ್ಟುಸಿರು ಹೊರಬರುವುದು ನಿಜ. ಹಾಗೆಯೇ ನನ್ನನ್ನು ಹಿಡಿದಿಟ್ಟುಕೊಂಡು ಓದಿಸಿದ ಕಾದಂಬರಿ. ಹಾಗಂತ ಇದನ್ನು ನಾನು ನಾಗಾಲೋಟದಿಂದ ಓದಿದ್ದೂ ಇಲ್ಲ. ಬಿಸಿಯಾದ ಕಾಫಿಯನ್ನು ಮೆಲ್ಲಗೆ ಹೀರಿ ಸವಿಯುವ ರೀತಿಯಲ್ಲಿ ಓದಿಸಿಕೊಂಡು ಹೋಗಿತ್ತು.

ಪ್ರತಿಯೊಬ್ಬ ಗೌಡ ಸಾರಸ್ವತನು ತಪ್ಪದೆ ಓದಬೇಕಾದ ಕಾದಂಬರಿ ಇದು. ತಮ್ಮ ತನವನ್ನು ಕಂಡು ಕೊಳ್ಳುವುದರಲ್ಲಿ ಈ ಕಾದಂಬರಿ ಒಂದು ಹಾದಿ ತೋರುವುದರಲ್ಲಿ ಸಂಶಯವಿಲ್ಲ. ಸುಮಾರು ಐನೂರು ವರ್ಷಗಳ ಹಿಂದಿನ ಗೋವೆಗೆ ನಮ್ಮನ್ನು ಕೊಂಡೊಯ್ದು ಆ ಕಾಲದ ಜನರನ್ನು, ಅವರ ರೀತಿ ನೀತಿಗಳನ್ನು, ಆಗಿನ ರಾಜಕೀಯ ಮತ್ತು ಸಾಮಾಜಿಕ ಚಿತ್ರಣಗಳನ್ನು ಕೊಡುತ್ತ ಸಾರಸ್ವತರು ಅಲ್ಲಿಂದ ಹೇಗೆ ಕೊಂಕಣ ತೀರದಲ್ಲಿ ಬಿತ್ತರಿಸಿ ಹೋದರು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಪೈಗಳು ಈ ಕಾದಂಬರಿಯಲ್ಲಿ ಚಿತ್ರಿಸುತ್ತಾರೆ. ಅಂತೆಯೇ ಈ ಸಾರಸ್ವತರು ಹೇಗೆ ಜೀವನವನ್ನು ತಮ್ಮ ಹುಟ್ಟೂರಾದ ಗೋವೆಯಿಂದ ದೂರವಾಗಿ ಪುನಃ ಕಟ್ಟಿದರು ಎಂದು ಏಳೆಂಟು ತಲೆಮಾರುಗಳ ಮೂಲಕ ಸ್ವಪ್ನ ಸಾರಸ್ವತ ನಮಗೆ ತೋರಿಸುತ್ತದೆ.
ಕಾದಂಬರಿಯಲ್ಲಿ ಬರುವ ನಾಗ್ದೋ ಬೇತಾಳ, ಮಾಲ್ಶಿ ಮಾಂಯಿ ದೇವಸ್ಥಾನ, ವೆರ್ನೆಗ್ರಾಮ ಹಾಗೆಯೇ ಪೋರ್ಚುಗೀಸರ ಕಾಟ ತಾಳಲಾರದೆ ವೆರ್ನೆ ಇಂದ ಗೂಳೇ ಹೊರಟ ಕುಟುಂಬಗಳು, ಇವರ ಪಯಣದುದ್ದಕ್ಕೂ ಸಿಗುವ ದಕ್ಷಿಣ ಕರಾವಳಿಯ ಊರುಗಳು, ಕೊನೆಯಲ್ಲಿ ಬರುವ ಕುಂಬ್ಳೆ ಮತ್ತು ಬಳ್ಳಂಬೆಟ್ಟು ಗ್ರಾಮಗಳನ್ನು ನಾವು ನೋಡದೆ ಇದ್ದರೂ ನಮ್ಮವಾಗಿಸಿ ಬಿಡುತ್ತವೆ.
ಈ ಕಾದಂಬರಿಯ ದೊಡ್ಡ ಹೆಗ್ಗಳಿಕೆಯೆಂದರೆ ಭಾರತದ ಇತಿಹಾಸದ ಅತ್ಯಂತ ನಾಟಕೀಯ ಕ್ಷಣಗಳಾದ ಯುರೋಪಿಯನ್ನರ ದಬ್ಬಾಳಿಕೆ, ಒಂದು ಪ್ರದೇಶದಿಂದ ವಲಸೆ ಬಂದು ಹೊಸತಾಗಿ ಇನ್ನೊಂದು ಪ್ರದೇಶದಲ್ಲಿ ಏಳಿಗೆ ಕಾಣುವಂತಹ ಸನ್ನಿವೇಶಗಳನ್ನು ಎಲ್ಲೂ ಅತಿರೇಕದ ಆಮಿಷಕ್ಕೆ ಒಳಗಾಗದೆ ಬಹಳ ಸಹಜವಾಗಿ ಬಿಂಬಿಸಿರುವುದು. ಆದರೆ ಇದೇ ಚಿತ್ರಣ ಕಾದಂಬರಿಯ ದ್ವಿತೀಯಾರ್ಧದಲ್ಲಿ ಸ್ವಲ್ಪ ಮಟ್ಟಿಗೆ ಪುನರಾವರ್ತಿತವಾಗಿ ಬೇಜಾರು ತರಿಸುವಂತಿತ್ತು. ಹಾಗೆಯೇ ಕಾದಂಬರಿಯ ಕಾಲಮಾನ 400 - 500 ವರ್ಷಗಳಷ್ಟು ಹಳೆಯದಾದರೂ ನನಗೇಕೋ ಕಥೆಯಲ್ಲಿ ಕೊಟ್ಟಿರುವ ವಿವರಗಳಿಂದ ಈ ಕಾಲಮಾನ ಸುಮಾರು 100 - 150 ವರ್ಷಗಳಷ್ಟು ಮಾತ್ರ ಹಳೆಯದೆಂದು ತೋರುತ್ತಿತ್ತು.
ಅನಿಸಿಕೆಗಳೇನೇ ಇರಲಿ ಸ್ವಪ್ನ ಸಾರಸ್ವತ ಕಾದಂಬರಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಕೊಡುಗೆಯೇ ಸರಿ. ಅದನ್ನು ನೀಡಿದ ಶ್ರೀ ಗೋಪಾಲಕೃಷ್ಣ ಪೈ ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.