Sunday, 12 May 2019

ಒಂದಲ್ಲಾ ಎರಡಲ್ಲಾ

ಸಮೀರ ಐಸ್ ಪೈಸ್ ಆಡಿದ್ದು
ಒಂದಲ್ಲಾ ಎರಡಲ್ಲಾ
ಸಮೀರ ಭಾನುವನ್ನು ಅಡಗಿಸಿದ್ದು
ಒಂದಲ್ಲಾ ಎರಡಲ್ಲಾ
ಸಮೀರ ಕಳೆದುಹೋಗಿದ್ದ ಸರ್ತಿ
ಒಂದಲ್ಲಾ ಎರಡಲ್ಲಾ
ಅವ ಭೆಟ್ಟಿಯಾದವರಲ್ಲಿ ಇದ್ದರು ಸ್ವಾರ್ಥಿ
ಒಂದಲ್ಲಾ ಎರಡಲ್ಲಾ
ಸಮೀರನ ಪ್ರೀತಿಗೆ ಸ್ವಾರ್ಥಿಗಳ ಕರಗಿದ್ದ ಮನ
ಒಂದಲ್ಲಾ ಎರಡಲ್ಲಾ
ಇಲ್ಲಿ ಪ್ರೀತಿ ಅಕ್ಕರೆಯಾಗಿ ಹರಿದ ಸಲ
ಒಂದಲ್ಲಾ ಎರಡಲ್ಲಾ
ಮೂರು ಭಾಷೆ ಮೂರು ಧರ್ಮ ಅವು ಸೇರಿದ ಸಲ
ಒಂದಲ್ಲಾ ಎರಡಲ್ಲಾ
ಪ್ರೀತಿಯನೆ ಮುದ್ದು ಮಾಡಲು ನೋಡಬೇಕು ನೀವೆಲ್ಲ
ಒಂದಲ್ಲಾ ಎರಡಲ್ಲಾ

No comments:

Post a Comment