ಇಂದು ಗಾಳಿಗಿಂತ ಹರಿಯುವ ನೀರಿನ ಶಬ್ದ ಜೋರಾಗಿತ್ತು
ಗಿಡುಗ ಪದೇ ಪದೇ ಮೀನು ಹಿಡಿಯಲು ಪ್ರಯತ್ನಿಸುತ್ತಿತ್ತು
ಬಿಸಿಲ ಕೋಲುಗಳು ಮೋಡಗಳ ಮರೆಯಲ್ಲಿ ಅವಿತಿತ್ತು
ಅಶ್ವತ್ಥ ಮರ ತನ್ನೆಲ್ಲ ಎಲೆಗಳನ್ನು ಉದುರಿಸಿ ತಣ್ಣನೆ ನಿಂತಿತ್ತು
ಪಕ್ಕದ ರೋಡಲ್ಲಿ ಓಡುತ್ತಿದ್ದ ಆಂಬುಲೆನ್ಸ್ ಹಾರ್ನ್ ಸ್ವಲ್ಪ ಜೋರಾಗಿಯೇ ಬಾರಿಸುತ್ತಿತ್ತು
ಯಾವತ್ತೂ ತಣ್ಣನೆ ಮಲಗಿರುತ್ತಿದ್ದ ನಾಯಿಗಳು ಅತ್ತಿಂದಿತ್ತ ಓಡುತ್ತಿದ್ದವು
ಕಾಲು ದಾರಿಯಲ್ಲಿ ಜಾಗಿಂಗ್ ಮಾಡುತ್ತಿದ್ದವರ ಏದುಸಿರು ಕಿವಿಗೆ ಬಡಿಯುತ್ತಿತ್ತು
ಉದ್ದಿನ ವಡೆ ಬಾಯಲ್ಲಿಟ್ಟರೆ ಮೆದುವಾಗಿತ್ತು
ಹಬೆಯಾಡುತ್ತಿದ್ದ ಕಾಫಿಯೂ ತಣ್ಣಗಾಗಿತ್ತು!
No comments:
Post a Comment