Sunday, 16 February 2025

ಮದುವೆ ಮನೆ

ಕರೆದಿಹುದೆನ್ನ ಸಹ್ಯಾದ್ರಿಯ ಮಡಿಲಿಗೆ ನೇತ್ರಾವತಿಯ ತುಡಿತ

ಸಂಸೆಯಲಿ ಕಾಲಿಟ್ಟಾಗ ಮತ್ತೆ ಮತ್ತೆ ಪನ್ನೀರಿನ ಸ್ವಾಗತ

ಮೈಯೆಲ್ಲಾ ತಂಪಾಗಿಸುವ ಹವೆ ಸುತ್ತಲೂ
ಮದುವೆ ಮನೆಯ ವಾತಾವರಣ ನಿರ್ಮಿಸಿದ ಹೂಗಳು

ಮಾಡಿತ್ತು ಹಕ್ಕಿಗಳ ಕಲರವ ಓಡಾಡುತ್ತಾ
ಗೌಜಿ ಹಬ್ಬಿಸಿದಂತೆ ಪುಟ್ಟ ಮಕ್ಕಳು

ಅಡುಗೆ ಮನೆಯ ರಾಡಿಗೆ ಗಲೀಜಾದ ಕಾಲನ್ನು
ತೊಳೆಯಲು ಕಾಯುತ್ತಿರುವ ತಂಪು ನೀರಿನ ತೊರೆಗಳು

ಬರೆದಿತ್ತಲ್ಲಿ ಒಂದೆಡೆ ಹರಿಯುವ ನದಿಯ ಬಳಿ
ಕುಡಿಯುವ ನೀರು ಗಲೀಜು ಮಾಡಬೇಡಿ

ಊಟದ ಸಮಯಕ್ಕೆ ನುಗ್ಗುವ ಮೋಡಗಳ ತಡೆದು
ಹಿಂದಿನ ಪಂಕ್ತಿ ಇನ್ನೂ ಮುಗಿದಿಲ್ಲ ಎನ್ನುವ ಶಿಖರಗಳು

ನೇತ್ರಾವತಿ ಬೆಟ್ಟದ ತುದಿಯನ್ನೇರಿ ನಿಂತ ಸಾಹಸ
ಮದುವೆ ಮಂಟಪವೇರಿ ವಧುವರರ ಕೈ ಕುಲುಕಿದ ಸಂತಸ



No comments:

Post a Comment