Sunday, 1 July 2018

ನೆನಪುಗಳೇ ಇಲ್ಲದ ಬಾಳು

ಚಿಲಕವಿಲ್ಲದ ಬಾಗಿಲನು
ಬಡಿಬಡಿದು ತೆರೆಯಲಾದೀತೇ?
ಗಂಟಿಲ್ಲದ ಬುತ್ತಿಯನು
ತಿರುತಿರುಚಿ ಬಿಚ್ಚಲಾದೀತೇ?
ನೂಲೇ ಇಲ್ಲದೆ ಹೆಣೆದ ಬಲೆಯನ್ನು
ಅಡ್ಡಡ್ಡಲಾಗಿ ಹರಿಯಲಾದೀತೇ?
ನೆನಪುಗಳೇ ಇಲ್ಲದ ಬಾಳನ್ನು
ಕೆದಕೆದಕಿ ಕೆಣಕಲಾದೀತೇ???

No comments:

Post a Comment