ತಟ್ಟನೆ
ಸೂರ್ಯ ಸಲ್ಲಿಸಿದ ಅಭಿನಂದನೆಯ ನಗೆಯಲ್ಲಿ
ಕೇಳಿದ
ಆಡೋಣವೇ ಆಟ,
ಉದ್ದುದ್ದ
ಮರಗಳ ಅಡ್ಡಡ್ಡ ಎಲೆಗಳ ಮರೆಯಲ್ಲಿ
ಅವನಂದ...
ನೀನೆಷ್ಟು ಓಡುವೆಯೋ ಜೋರಾಗಿ, ನಾನೂ ಅಷ್ಟೇ ಓಡುವೆ
ಅವನೇ
ಸರಿ, ಎಷ್ಟೇ ಓಡಿದರೂ ಇದ್ದ ಅಂತರ ಅಷ್ಟೇ,
ನಮ್ಮಿಬ್ಬರ ನಡುವೆ
ಒಮ್ಮೆ
ಗುಡ್ಡದಾ ಹಿಂದೆ, ಒಮ್ಮೆ ಮರದ ಬದಿಗೆ, ಮರೆಯಾಗಿ
ಪುನಃ ಬರುತಿದ್ದನವನು ಹೀಗೆ
ನಾನೂ
ಮರಗಳ ಹಿಂದೆ, ಎಲೆಗಳ ಬದಿಯಲ್ಲಿ ಹೊಂಚು ಹಾಕಿ ಅರಸುತ್ತ ನಡೆದಿದ್ದೆ
ಹಾಗೆ
ಅವನೋ
ಕಳ್ಳ, ನಸುನಗುತ್ತಾ ಧುತ್ತೆಂದು ಬರುವ, ಮತ್ತೆ ಎಲ್ಲೋ ಓಡುವ
ಮೋಡದ
ಮರೆಯಿಂದ ಮಂದಹಾಸ ಬೀರುತ್ತಾ ಬಂದು ನನ್ನ ಹಿಡಿಯೆನ್ನುವ
ಮತ್ತೆ
ಮೋಡದ ಮರೆಯಾಗಿ, ಬೆಳ್ಳಿ ಗೆರೆಗಳೆನ್ನೆಳೆಯುತ್ತ ಮುಗುಳು ನಗುವ
ಹಾಗೇ
ಮರೆಯಾದವ ಒಮ್ಮೆ ಹೋಗೆ ಬಿಟ್ಟನೋ ಎನುವಂತೆ
ಕಣ್ಮರೆಯಾಗುವ
ಮುಗಿಯಿತೀ
ಆಟ ನಾನೆನಲು, ಬೆಟ್ಟದಾ ತುದಿಯಿಂದ ಚಿಣ್ಣನೇ ಚಿಂಗುವ
ಹಿಡಿ
ನನ್ನ ಎನ್ನುವ...
ಉತ್ಸಾಹವು
ಇಮ್ಮಡಿಯಾಗಿ, ವೇಗವನು ತೀವ್ರಗೊಳಿಸಿ
ನಾ ಮತ್ತೆ ಓಡುವೆ
ಈ ಸಲವಂತೂ ನಾ ಅವನನ್ನು ಖಂಡಿತಾ
ಹಿಡಿದೇ ತೀರುವೆ
ಎಷ್ಟೇ
ಓಡಿದರೂ ನನ್ನ ಕೈ ಸಿಗದಿರೆ
ಸಾಕೋ ಮಾರಾಯ ನಾನೆನಲು,
ಮಾಡುತ್ತಾ
ಗೇಲಿಯ, ಹಾರುತ್ತ ಬೇಲಿಯ ಕಿಲಕಿಲನೆ ನಗುತ್ತ
ಆ ಮರೆ ಈ ತೆರೆಗಳಾ
ಮಧ್ಯದಲಿ ನಡೆದಿಹುದು ನಮ್ಮ ಕಣ್ಣಾ ಮುಚ್ಚಾಲೆ
ಮತ್ತೆ ಮೋಡಗಳ
ಆಸರೆಯ ಬೇಡಿ, ನಿನ್ನ ಕೈ ಸಿಗು ಒಲ್ಲೆನೆಂದು ಕಾಡಿ
ಹಾಗೆಯೇ ಕತ್ತಲು
ಕವಿದಿರಲು, ಮಂಪರು ಮೈಮೇಲೆ ಸುಳಿದಿರಲು
ಮರೆಯಾಗಿ ಹೋದವನ
ಕಾಯುತ್ತ ನಾ ನನ್ನ ಕಣ್ಣ ಮುಚ್ಚಲೆ
No comments:
Post a Comment